Back to Lyrics List
Kannada (ಕನ್ನಡ)
O Nanna Yesuve
ಓ ನನ್ನ ಯೇಸುವೇ ನಿನ್ನೊಂದಿಗೆ ಜೀವಿಸಲು
ನನ್ನ ಆತ್ಮವು ಹರ್ಷಿಸಿದೆ
ಆನಂದದಿ ನಲಿಯುತಿದೆ (2)
ಮಿತಿಯಿಲ್ಲದ ನಿನ್ನ ಆ ದಿವ್ಯ ಸ್ನೇಹವ
ಪರಮಪವಿತ್ರನೇ ನನ್ನಲ್ಲಿ ತುಂಬಿಸುವೆ (2)
ಬಾ ಬಾ ನನ್ನೇಸುವೇ, ಜೀವಂತ ರೊಟ್ಟಿಯೇ
ಹೃದಯದಿ ಆರಾಧಿಸುವೆ (2)
ಆರಾಧನೆ ಆರಾಧನೆ
ಯೇಸುವೇ ಆರಾಧನೆ (2)
ದಿವ್ಯಕರುಣೆಯ ಸುರಿಶೇ ಪ್ರಭುವೇ
ನೀ ಬರುವ ಸಮಯದಿ
ಸ್ವರ್ಗೀಯ ಅನುಭವ ನೀಡುವೆ ದೇವನೇ (2)
ನನ್ನ ಉಸಿರಲಿ ನೀನು ಉಸಿರಾಗಿ ಬೆರೆಯಲು
ನನ್ನೊಂದು ಬೆರೆಯುವ ದೇವಾಲಯವಾಗುವೆ
ಬಾ ಬಾ ನನ್ನೇಸುವೇ, ಜೀವಂತ ರೊಟ್ಟಿಯೇ
ಹೃದಯದಿ ಆರಾಧಿಸುವೆ (2)
ಆರಾಧನೆ ಆರಾಧನೆ
ಯೇಸುವೇ ಆರಾಧನೆ (2)
ರೊಟ್ಟಿಯು ದೇಹವಾಗಿ
ರಸವು ರಕ್ತವಾಗಿ
ಮಾರ್ಪಡಿಸುವ ದೇವಾ
ನನ್ನನ್ನು ಮಾರ್ಪಡಿಸು ಓ ದೇವನೇ (2)
ಈ ಜೀವಕೆ ನೀನೇ ಆಸರೆಯು ಪ್ರಭುವೇ
ನಿನ್ನೊಂದಿಗೆ ನಿತ್ಯಕ್ಕೂ ಜೀವಿಸುವೆ ದೇವನೇ
ಬಾ ಬಾ ನನ್ನೇಸುವೇ, ಜೀವಂತ ರೊಟ್ಟಿಯೇ
ಹೃದಯದಿ ಆರಾಧಿಸುವೆ (2)
ಆರಾಧನೆ ಆರಾಧನೆ
ಯೇಸುವೇ ಆರಾಧನೆ (2)
KARAOKE AVAILABLE
Get Karaoke Track →
Sing along with O Nanna Yesuve Karaoke
Download karaoke audio tracks (Studio Instrumental).